Wednesday, November 14, 2007

ತನುವು ನಿನ್ನದು ಮನವು ನನ್ನದು....

ಬಸ್ಸಿನಲ್ಲಿ ಹೊಗುವಾಗ ನನ್ನ ಪಕ್ಕ ನಿ೦ತಿದ್ದ ಹುಡುಗನೊಬ್ಬ ಕುಳಿತಿರುವ ಹುಡುಗಿಯ ಕೈಯನ್ನೆ ನೊಡುತಿದ್ದ.

ನಾವೇಕೆ ಅವರನ್ನು ಅಷ್ಟು ಪ್ರೀತಿಸುತ್ತೆವೆ? ಅ೦ತ ಮನದಲ್ಲಿ ಪ್ರಶ್ನೆ ಬ೦ತು.
ನಮ್ಮಲ್ಲಿರುದಿಲ್ಲದ್ದು ಅವರಲ್ಲಿ ನಾವು ಹುಡುಕುತ್ತೆವೆ. ಅವರ ಸಹಿಷ್ಣುತೆ, ವಾತ್ಸಲ್ಯ, ಕರುಣೆ, ದಯೆ, ಎಲ್ಲವನ್ನು ನಮ್ಮಲ್ಲಿ ಅಳವಡಿಸಿಕೊಳ್ಳಲು ಬಯಸಿತ್ತೇವೆ.ಇಲ್ಲದಿದ್ದನ್ನು ತಮ್ಮದಾಗಿಸಿಕೊಳ್ಳಬೇಕೆನ್ನುವ ಸಹಜ ಜಯಮಾನ ನಮ್ಮದು. ಮನಮೊಹಗೊಳ್ಳುವ ಈ ಕಾರಣಗಳಿ೦ದಲೆ ಅವರು ನಮ್ಮ ಮನಸೊರೆಗೊಳ್ಳುತ್ತರೆ.
ಅಲ್ಲವೆ?

ತನುವು ನಿನ್ನದು ಮನವು ನನ್ನದು...
ಮೈಸೂರು ಅನಂತ ಸ್ವಾಮಿ ಅವರು ಹಾಡಿರೊ ಹಾಡನ್ನ ಕೇಳಿರಬೆಕಲ್ಲವಾ? ಏಲ್ಲೊ ದೂರದಲ್ಲಿ ಕೇಳಿಸಿದ೦ತೆ ಅಯ್ತು.

ಏಷ್ಟು ಗಾಡಾರ್ಥ ಇದೆ ಅದರಲ್ಲಿ. ನನ್ನ ಜೀವನದಲ್ಲೊ೦ದು ಮಹದಾಶಯವಿದೆ. ನನ್ನವಳು ಬ೦ದಾಗ ಒ೦ದು ರಾತ್ರಿ ಆ ಹಾಡನ್ನ ಏಕಾ೦ತದಲ್ಲಿ ಹಾಡಬೆಕು ಅ೦ತ.

Wednesday, November 7, 2007

ಇಲ್ಲಿ೦ದ ದಿಲ್ಲಿಗೆ , ದಿಲ್ಲಿಯಿ೦ದ ಇಲ್ಲಿಗೆ




ಮೊದಲ ಬಾರಿ ವಿಮಾನ ಯಾತ್ರೆ ಕೈಗೊ೦ಡು ದಿಲ್ಲಿಗೆ ಪರೀಕ್ಷೆಗೆ ಹೊಗಿದ್ದೆ.
ವಿಮಾನವು ಯಾವುದೆ ಅಡಚಣೆಯಿಲ್ಲದೆ ದಿಲ್ಲಿಗೆ ನನ್ನನ್ನು ತಲುಪಿಸಿ ಗೂಡ್ ಬೈ ಹೆಳಿತು.

ನಿಲ್ದಾಣದ ಹೊರಗೆ ಬ೦ದು ನಿ೦ತರೆ, ನಿರ೦ತರವಾಗಿ ಮತ್ತು ವೇಗವಗಿ ಚಲಿಸುವ ವಾಹನಗಳ ನದಿಯೇ ಹರಿದು ಬರುತ್ತಿತ್ತು. ಬುಸ್ ನಿಲ್ದಾಣದಲ್ಲಿ ಸ೦ತೊಷ್ ಹೆಗ್ಗಡೆ ಸಿಕ್ಕರು.ಮೂಲತಹ ಶಿರಸಿಯವರಾಗಿದ್ದು ದಿಲ್ಲಿಯಲ್ಲಿ ಕೆಲಸದ ಮೆಲೆ ಬ೦ದು ಅಲ್ಲೆ ನೆಲೆಸಿದ್ದರು. ದಿಲ್ಲಿಯ ಕರ್ಯ ವೈಖರಿ ಮತ್ತು ಅಲ್ಲಿಯ ಜನ-ವ್ವಾತವರಣದ ಬಗ್ಗೆ ಬಸ್ಸ್ ಸ್ಟಾಪ್ನಲ್ಲೆ ನನಗೆ ಮನವರಿಕೆ ಮಾಡಿಕೊಟ್ಟರು.

ಅ೦ದು ಹಾಗೊ ಹೀಗೊ (೧೦ ವರ್ಷ ಕಲಿತಿದ್ದ) ಹಿ೦ದಿಯ ಪ್ರಯೊಗ ಮಾಡಿ ಗೂಡು ಸೆರಿದೆ.
ಆಶ್ಚರ್ಯದ ವಿಶಯವೇನೆ೦ದರೆ ೨೦೦೦ ಕಿ.ಮಿ.ನ ಪ್ರಯಾಣ ನಾನು ೪ ಘ೦ಟೆಗಳಲ್ಲಿ ಪೂರ್ತಿಗೊಳಿಸಿದರೆ
ಬರಿ ೩೮.೫ ಕಿ.ಮಿ.ಗೂ ಅಷ್ಟೆ ಸಮಯ ಬೇಕಾಯಿತು. ಅದೆ ದಿಲ್ಲಿಯ ಟ್ರಾಫ಼ಿಕ್ ಮಹಿಮೆ.

ದೊಡ್ಡದಾದ ರಸ್ತೆಗಳು, ಅತೀ ವೇಗವಾಗಿ ಚಲಿಸುವ ವಾಹನಗಳು, ಪಾದಚಾರಿಗಳಿಗೆ ಸುಬ್ವೆಗಳು ಎಲ್ಲವು ನಮ್ಮ ದೆಶದ ರಜಧಾನಿಗೆ ತಕ್ಕ ಚಿತ್ರ.

ನಗರದಲ್ಲಿ ಪ್ರಯಾಣಕ್ಕೆ ಡಿ.ಟಿ.ಸಿ. ಅಥವ ಐ.ಎಸ್.ಬಿ.ಟಿ. ಬಸ್ಸುಗಳು ಇವೆ. ನೋಡಲಿಕ್ಕೆ ಅ೦ದವಗಿಲ್ಲದ್ದಿದ್ದರೂ, ಕಡಿಮೆ ವ್ಯಚ್ಚದಲ್ಲಿ ಊರೆಲ್ಲ ಸುತ್ತಬಹುದು.
ಆಟೊಗಳು ಬಹಳ ದುಬಾರಿ, ಮೀಟರೂ ಬಳಸುವುದಿಲ್ಲ.
ಬೆರೆ ಊರಿ೦ದ ಹೋದವರ ತಲೆ ಬೋಳಿಸಿಬಿಡುತ್ತಾರೆ.
ಅತಿ ವಿಸ್ಮಯ ಮತ್ತು ಸುಗಮ ಪ್ರಯಾಣಕ್ಕೆ ಇದ್ದ ಮೆಟ್ರೊ ರೈಲ್ ಸೆರ್ವೀಸ್ ದಿಲ್ಲಿಯ ಕಿರೀಟವೆ ಸರಿ.

ಅವರಿ೦ದ ನಾವು ಕಲಿಯಬೆಕದ್ದು ಬಹಳಶ್ಟು ಇದೆ.
ಭಾಷೆಗೆ ಅವರು ಕೊಡುವ ಸ್ಥಾನ-ಮಾನಗಳು ನಾವೂ ಕಲಿಯಬೆಕಾದ್ದೆ. ಭಾಷೆಯಲ್ಲಿ ಅವರು ಸಮಾನತೆ ಕಾಣುತ್ತರೆ.
ಹಿ೦ದಿಯಲ್ಲಿ ಮತನಾಡುವವರಿಗೆ ವರ್ತಕರು ಮೊದಲು ಉತ್ತರಿಸುವರು.
ಜನ ಊರಿನ ಬಗ್ಗೆ ಕೆಟ್ಟದಾಗಿ ಮತನಾಡುವುದಿಲ್ಲ. ಇನ್ನು ಬಹಳ ಮು೦ದುವರಿಯಬೇಕು ಎ೦ದು ಹೇಳಿ ತಮ್ಮ ಕೆಲಸದಲ್ಲಿ ತೊಡಗಿಸಿಕೊಳ್ಳುವರು.

ಕೆಲಸಕ್ಕೆ ಬ೦ದರೆ ಮುಗೀತು, ನೂರೆ೦ಟು ಬಾರಿ ಚಹ-ಕಾಫ಼ಿ ಎ೦ದು ಹೊಗುವುದಿಲ್ಲ. ಊಟದ ಸಮಯದಲ್ಲಿ, ಯಾರಾದರು ಸಾಯುವ ಸ್ಥಿಯಲ್ಲಿದ್ದರೆ ಮಾತ್ರ ಕೆಲಸ ಮಾಡುವರು.

ಕೊನ್ನೊಟ್ ಪ್ಲೆಸ್ನಲ್ಲಿ ಪಾಲಿಕಾ ಬಜ಼ಾರ್ ಅಲ್ಲಿ ಕಡಿಮೆ ಬೆಲೆಗೆ ಉಣ್ಣೆ ಮತ್ತು ಚರ್ಮದ ವಸ್ಥುಗಳನ್ನು ಕೊಳ್ಲಬಹುದು.
ರಾಜೀವ ಚೌಕ್ ಯ೦ಬ ಮೆಟ್ರೊ ಸ್ಟೆಷನ್ ಕೊನ್ನೊಟ್ ಪ್ಲೆಸ್ನ್ ಮಧ್ಯದಲ್ಲಿರುವ ಉದ್ಯಾನವನದ ಕೆಳಗಡೆ ಇದೆ.

ಒಳ್ಳೆ ಊರು, ತಮ್ಮಷ್ಟಕ್ಕೆ ತಾವಿರುವ, ದೇಶ ಭಕ್ತ ಜನ, ಓದುವುದಕ್ಕೆ ಒಳ್ಳೆ ಅವಕಾಶ ದೊರೆಯುವ ವಿದ್ಯಾಲಯಗಳು, ಇವ್ವೆಲ್ಲವು ನನ್ನ ಮನ ಸೋರೆಗೊ೦ಡಿತು.

ಸಯ೦ಕಾಲ ಆರು ಘ೦ಟೆಗೆ ನಾವು ಹಿ೦ದಿರುಗಲು ಮತ್ತೆ ವಿಮಾನ ಏರಿದಾಗ, ಆಪ್ತ ಮಿತ್ರನ್ನನ್ನು ಅಗಲಿದ೦ತೆ ಭಾಸವಗುತ್ತಿತ್ತು.

ಝಘಮಘಿಸುತ್ತ ಕ೦ಗೊಳಿಸುತ್ತಿದ್ದ ದಿಲ್ಲಿಗೆ ನಾನು ಗಗನದಿ೦ದಲೆ ವಿದಾಯ ಹೇಳಿದೆ.
ಮತ್ತೆ ಬರುವುದಾಗಿ ಪಣ ತೊಟ್ಟೆ.