Wednesday, October 31, 2007

ಹೀಗೊಂದು ಕಥೆ

ಹೀಗೊಂದು ಕಥೆ

ನಿನ್ನೆ ಇಂದ ಬರಿ ಓದ್ತಾಇದ್ದೆ ಯಾಕೋ ಒಂದತರ ಮನಸಲ್ಲಿ ಎನೊ ಕಳವಳ ,
ತುಂಬಿದ ದಿನ ಕಳೆದಾಗ ಬರುವ ಆಯಾಸ ಈ ತಾರಾ.
ಬಹಳ ದಿನ ಎಲ್ಲಾದರೂ ಸುತ್ತಾಡಿಕೊಂಡು ಬರಣ ಅಂತ ಹೊರಗೆ ಹೊರಟೆ...

ದಿನ ಸಂಜೆಯತ್ತ ಆಫೀಸಿನಿಂದ ಕೈಚೀಲ ಹೊತ್ತು ಹೊರಟ ಗುಮಾಸ್ತನ ತರ ಮೆಲ್ಲಗೆ ಕತ್ತಲ ಕಡೆಗೆ ಹೊರಟಿತ್ತು.
ಸ್ವಲ್ಪ ಹೊತ್ತು ನಡೆದು ಹಳೆ ಸ್ಕೂಲನ ಕಡೆಗೆ ಹೋದಾಗ ಅಲ್ಲಿಯ ದೀಪಗಳು ಉರಿಯುತಿತ್ತಿದ್ದವು.
ಒಳಗೆ ಹೋಗಿ ಮೇಷ್ಟ್ರನ ಮಾತಾಡಿಸಿಕೊಂಡು bus stand ಗೆ ಬಂದೆ.
ದೀಪದ ಕೆಳಗೆ ನಿಂತು ಬಸಗೆ ಕಾಯುತಿದ್ದೆ. "ರೀ, ಟೈಮ್ ಎಷ್ಟು?" ಅಂತ ಒಂದು ಹೆಣ್ಣು ಶಬ್ದ ನನ್ನನ್ನು ಕೇಳಿತು. ಹಿಂದೆ ತಿರುಗಿ ನೋಡಿದರೆ ; ಅವಳೇ

[ಅಲ್ಲ ರೀ ಆ ಥರ ಕಥೆ ಅಲ್ಲ ಇದು .]

ನಿಜವಾಗಲು ನಿಂತಿದ್ಲು.

ಯಾಕೋ ಎನೊ ಹಳೆ ಫೋಟೋನಲ್ಲಿ ಕಾಣಿಸಿದ ಹಾಗೆ ಅನಿಸ್ತು. "೮:೩೦ ರೀ" ಅಂದೆ.
"ನೀವು ಇಲ್ಲೇ ಮೇಷ್ಟ್ರ ಹತ್ರ ಪಾಠಕ್ಕೆ ಬರ್ತಿದ್ರ?" ಅಂತ ಕೇಳ್ದೆ.
ಕೈಯಲ್ಲಿ ಏನಾದ್ರು ಚಪ್ಪಲಿ ತೊಗೊಂಡ್ರೆ ಓಡಿ ಹೋಗ ಸಂಚು ಮಾಡೊ ಅಷ್ಟರಲ್ಲಿ "ಆದರ್ಶ ಅಲ್ವ?"ಅಂತ ಅವಳೆ ಕೆಲಿಬಿಡೋದ?
ಹುಸ್ಸ್ ಅಪ್ಪ ಅಂತ ಉಸಿರು ಬಿಟ್ಟು "ಕಲ್ಪನಾ, ನೀನು ನನ್ನ ಗುರ್ತುಸ್ತಿಯೋ ಇಲ್ವೋ ಅಂದ್ಕೊಂಡಿದ್ದೆ!" ಅಂದೆ.


ಬಸ್ ಬಂದ ಮೇಲೆ ಅವಳು ಬಸ್ಸನ ಏರಿ ನನು ಕುತಲ್ಲಿಗೆ ಬಂದು ಮುಂದಿನ ಸಿಟಲ್ಲಿ ಕೂತೆ ಬಿಟ್ಟಳು .
ಹಿಂದೆ ತಿರುಗಿ "ಮತ್ತೇನ್ ಸಮಾಚಾರ?"ಅಂತ ಕೇಳ್ದಾಗ ಎನ್ ಹೇಳಲಿ ನನ್ ಕಥೆ?
"ಏನು ಇಲ್ಲ , ಡಾಕ್ಟರ್ ಆಗಿದ್ದಿನಿ ಸ್ವಲ್ಪ ದಿವಸಕ್ಕೆ ಪರದೇಶ ಪ್ರಯಾಣ- ಮುಂದೆ ಓದಲಿಕ್ಕೆ "ಅಂದೆ.
ಮಾಡುವೆ ಆಯ್ತ ಅಂದ್ಲು
ಊಹ್ಹೂ ಅಂತ ತಲೆ ತೂಗಿದೆ.
ಏನೋ ಅನ್ನಿಸಿರಬೇಕು, "ಜಲ್ದಿ ಮಾಡುವೆ ಮಾಡಿಕೊಂಡು settle ಆಗು. ನಾನು orkutಅಲ್ಲಿ ಕಾಲೇಜ್ community ಅಲ್ಲಿದ್ದಿನಿ ಮೈಲ್ ಮಾಡೊ " ಅಂದಳು.
ಬಸ್ಸು ಇನ್ನಷ್ಟರಲ್ಲಿ ನಿಲ್ಲಿಸಿದ. "ನನ್ನ ಸ್ಟಾಪ್ ಇದೆ" , ಅಂತ ಹೇಳಿ ಇಳಿದಳು.


ಇಳಿಯುವಾಗ ಕಾಲಿನ ಉಂಗುರ ಕಾಣಿಸಿತು. ಹಿಂದೆ ತಿರುಗಿ ನೋಡಿದಾಗ ಅವಳ ಕಣ್ಣಲ್ಲಿ ಎನೊ ಮಿಂಚಿತ್ತು.

"ದೀರ್ಘ ಸುಮಂಗಲೀ ಭವ "ಅಂದುಕೊಂಡೆ.


***********


ಕೆಲ ದಿನಗಳ ನಂತರ ಕೆನಡಾದ ಶುಷ್ಕ ವಾತಾವರಣ, ಅಲ್ಲಿನ ಶ್ವೇತ ಮಂಜು ನನ್ನನ್ನು ಮುಸುಕಿತ್ತು .
ಪರ ದೇಶ, ಪರ ಭಾಷೆ. ಇಲ್ಲಿ ನಂಗೆ ಯಾರು ಗೊತ್ತಿಲ್ಲ, ನಾನು ಯಾರಿಗೂ ಗೊತ್ತಿಲ್ಲ.
ಮೊದಲಾಗಿ ಅವಳು ಇಲ್ಲಿ ಇರಲ್ಲಿಲ್ಲ.
ಇದ್ದರೆ ಬರಿ ಅವಳ ನೆನಪು ಮಾತ್ರ.

hospitalಗೆ ಹೋಗಲು bus stopನಲ್ಲಿ ಕಯುತ್ತಿರುವಗ ಯಾರೊ ಹೆಣ್ಣು ಕನ್ನಡದಲ್ಲಿ "ಸರ್, ಟೈಮ್ ಎಷ್ಟು ?"ಅಂದ್ರು.

***********

ಆ ದಿನ ಮನೆಗೆ ಹೋದ ಮೇಲೆ "ಅಮ್ಮ ನಾಳೆ ಯಾರ ಮನೆಗೋ ಹೆಣ್ಣು ನೋಡ್ಬೇಕು ಅಂದೆ ಅಲ್ಲ . ಹೋಗೋಣ " ಅಂದೆ

1 comment:

the stygian sailor said...

font is too small
besides no offence meant, but please post in english only